ಬೆಳಗಾವಿ

ಆಸ್ತಿ ವ್ಯಾಜ್ಯಕ್ಕಾಗಿ ವಕೀಲರಿಂದಲೇ ವಕೀಲನ ಹತ್ಯೆ!!

ಬೆಳಗಾವಿ:

ಆಸ್ತಿ ವ್ಯಾಜ್ಯಕ್ಕಾಗಿ ವಕೀಲನೊಬ್ಬನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸಂವಸುದ್ದಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಏಪ್ರೀಲ್ 29 ರಂದು ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದಿಂದ ರಾಯಭಾಗ ಕೋರ್ಟಗೆ ಹೋಗುವಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಂತೋಷ್ ಪಾಟೀಲ್ ಎಂಬ ವಕೀಲನನ್ನು ಅಡ್ಡಗಟ್ಟಿ ಆತನನ್ನು ಅಪರಿಸಿಕೊಂಡು ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪಹಣಕ್ಕೊಳಗಾದ ಸುರೇಶ ಪಾಟೀಲ್ ಪತ್ನಿ ರೇಖಾ ಪಾಟೀಲ್ ರಾಯಭಾಗ ಪೊಲೀಸರಿಗೆ ತನ್ನ ಪತಿ ಅಪಹರಣಕ್ಕೊಳಗಾದ ಕುರಿತು‌ ದೂರು ನೀಡಿದ್ದರು.ವಕೀಲ ಸಂತೋಷ್ ಪಾಟೀಲರನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು ಆತನನ್ನು ಉತ್ತರ ಕನ್ನಡ ಜಿಲ್ಲೆಯ ಜೊಡಾಯಿ ತಾಲೂಕಿನ ಗಣೇಶಗುಡಿ ಎಂಬಲ್ಲಿ ಸಂತೋಷ್ ಪಾಟೀಲ್ ತಲೆ ತುಂಡರಿಸಿ ನಂತರ ಸಾಕ್ಷೀ ನಾಶ ಮಾಡುವ ಉದ್ದೇಶದಿಂದ ಮೃತ ಸಂತೋಷ ದೇಹವನ್ನು ಅಲ್ಲಿಯೇ ಸುಟ್ಟು ಬಳಿಕ ಊರಿಗೆ ಬಂದಿದ್ದರು. ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಈ ಪ್ರಕರಣವು ತಲೆನೋವಾಗಿ ಪರಿಣಮಿಸಿತ್ತು. ಎಲ್ಲಾ ಆಯಾಮದಗಳಲ್ಲೂ ವಿಚಾರಣೆ ನಡೆಸಿದ ಪೊಲೀಸರು ಅನುಮಾನಾಸ್ಪದ ಆರೋಪಿ ಪೊಲೀಸರಿಗೆ ಉದಯಕುಮಾರ್ ಎಂಬ ಸಂಶಯಾಸ್ಪದ ವ್ಯಕ್ಯಿ ಸಿಕ್ಕಿದ್ದ ಆತನನ್ನು ಕರೆತಂದು ವಿಚಾರಣೆ ಮಾಡಿದಾಗ ಅಪಹರಣದ ಕೇಸ್ ಕೊಲೆ ಕೇಸ್ ಆಗಿ ಬದಲಾಗಿದೆ ಎಂದು ಪೊಲೀಸರಿಗೆ ಮನದಟ್ಟಾಗಿದೆ. ಪ್ರಕರಣ ಗೊತ್ತಾಗುತ್ತಿದ್ದಂತೆ ಆರೋಪಿ ಹೇಳಿದಂತೆ ಪೊಲೀಸರು ಘಟನೆ ನಡೆಯ ಗಣೇಶಗುಡಿ ಪ್ರದೇಶದಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಒಂದು ಅರ್ದಂಭರ್ದ ಸುಟ್ಟ ಶರ್ಟ್ ಹಾಗೂ ಚಪ್ಪಲಿ ಹಾಗೂ ಮುಳೆಗಳು ಸಿಕ್ಕಿವೆ. ತಕ್ಷಣ ಕಾರ್ಯಪ್ರವರ್ತರಾದ ಪೊಲಿಸರು ಅವುಗಳು ಸಂತೋಷ್ ಪಾಟೀಲನದ್ದೋ ಅಲ್ಲವೋ ಎಂದು ಡಿಎನ್ಎ ಪರೀಕ್ಷೆ‌ ನಡೆಸಿದಾಗ ಅದು ಮೃತ ಸಂತೋಷ್ ಪಾಟೀಲನದ್ದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.ಕೊಲೆಯಾಗಿದ್ದು ಸಂತೋಷ್ ಪಾಟೀಲ್ ಎಂದು ಗೊತ್ತಾದ ತಕ್ಷಣ ಪೊಲೀಸರು ಕೊಲೆಗೆ ಕಾರಣವನ್ನು ಕೆದಕಿದ್ದಾರೆ. ಈ ವೇಳೆ ಮೃತ ವಕೀಲ ಸಂತೋಷ್ ಪಾಟೀಲ್ ಹಾಗೂ ಆತನ ಸಹೋದ್ಯೋಗಿ ಆರೋಪಿ ವಕೀಲ ಶಿವನಗೌಡ ಪಾಟೀಲ್ ಇಬ್ಬರ ಮಧ್ಯೆ ರಾಯಭಾಗ ಪಟ್ಟಣದಲ್ಲಿ 1 ಎಕರೆ 4 ಗುಂಟೆ ಜಮೀನಿಗಾಗಿ ವ್ಯಾಜ್ಯ ಇದ್ದಿದ್ದು ಪೊಲೀಸರ ಗಮನಕ್ಕೆ ಬಂದಿದೆ. ಅಲ್ಲದೆ ಅದೇ ಜಮೀನು ವಿಚಾರಕ್ಕೆ ಮೃತ ಸಂತೋಷ್ ಪಾಟೀಲ್ ರಾಯಭಾಗ ಕೋರ್ಟ್ ನಲ್ಲಿ ಸಿವಿಲ್ ದಾವೆಯನ್ನೂ ಸಹ ಹೂಡಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟಾದ ಶಿವನೌಡ ಪಾಟೀಲ್ ತನ್ನ ಕಿರಿಯ ವಕೀರಾದ ಭರತ್ ಕೋಳಿ,ಕಿರಣ್ ಕೆಂಪವಾಡೆ, ಮಹಾವೀರ ಹಂಜೆ,ಜೊತೆ ಸೇರಿಕೊಂಡು ಕಿರಣ್ ಕೆಂಪವಾಡೆ ಮುಖಾಂತರ ಆರೋಪಿತರಾದ ಸುರೇಶ ನಂದಿ,ಉದಯಕುಮಾರ್ ಮುಶೆನ್ನವರ್, ಸಂಜಯ್ ಕುಮಾರ್ ಹಳಬ್ಬನ್ನವರ್,ರಾಮು ನಾಯಕ್,ಇವರ ಮುಖೇನ ಸಂತೋಷ ಪಾಟೀಲನನ್ನು ಅಪರಿಸಿಕೊಂಡು ಹೋಗಿ ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಸಧ್ಯ ಸಂತೋಷ್ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಕೊಲೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು,ಹಾಗೂ ಮಾರಕಾಸ್ತ್ರ ಸೇರಿ ಆರೋಪಿತರ ಮೊಬೈಲುಗಳು ಬೈಕ್‌ ವಶಪಡಿಸಿಕೊಳ್ಳಲಾಗಿದೆ‌.

ಸಂತೋಷ್ ಕೊಲೆ ಆರೋಪಿಗಳು
ಕೊಲೆಯಾದ ವಕೀಲ ಸಂತೋಷ್ ಪಾಟೀಲ್
TV24 News Desk
the authorTV24 News Desk

Leave a Reply