ಹಣಕಾಸಿನ ವಿಚಾರಕ್ಕೆ ಶುರುವಾದ ಜಗಳ ರಾಜನಕಟ್ಟೆ ಗ್ರಾಮದಲ್ಲಿ ರಕ್ತ ಚೆಲ್ಲಿತು..!
ಗೋಕಾಕ: ಯೋಧನ ಮೇಲೆ ಮತ್ತೊಬ್ಬ ಯೋಧ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಯೋಧನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಬಸವರಾಜ ಗಾಯಾಳು ಯೋಧ.
ನಂಜುಂಡಿ ಲಕ್ಷ್ಮಣ ಬೂದಿಹಾಳ ಗುಂಡಿನ ದಾಳಿಗೈದ ಆರೋಪಿ. ಇಬ್ಬರೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಣಕಾಸಿನ ವಿಚಾರಕ್ಕೆ ನಡುವೆ ಗಲಾಟೆಯಾಗಿದೆ. ಈ ವೇಳೆ ಬಸವರಾಜ ಮೇಲೆ ನಂಜುಂಡಿ ಲಕ್ಷ್ಮಣ ಬೂದಿಹಾಳ ಗುಂಡಿನ ದಾಳಿ ನಡೆಸಿದ್ದಾರೆ.
ಹೀಗಾಗಿ ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಇನ್ನೂ ಈ ಘಟನೆ ಬಗ್ಗೆ ಪ್ರತಿಕ್ರಿಯೆಸಿದ ಎಸ್.ಪಿ ಭೀಮಾ ಶಂಕರ್ ಗುಳೇದ್ ನಿನ್ನೆ ದಿವಸ ನಂಜುಂಡಿ ಎಂಬ ಯೋಧ ಬಸವರಾಜ ಎಂಬ ಯೋಧನ ಮೇಲೆ ಗುಂಡು ಹಾರಿಸಿದ್ದಾನೆ ,
ಇದಕ್ಕೆ ಪ್ರಮುಖ ಕಾರಣವೆಂದರೆ ಆರೋಪಿ ನಂಜುಂಡಿ ಮತ್ತೊಬ್ಬ ಯೋಧ ಬಸವರಾಜ ಯೋಧನ ಮಾವ ಧರ್ಮಪ್ಪನಿಗೆ 1.ಲಕ್ಷ.75 ಸಾವಿರ ಹಣ ಕೊಟ್ಟಿರುತ್ತಾನೆ , ನಿನ್ನೆ ದಿವಸ ನಂಜುಂಡಿ ಹಣ ಕೇಳಲು ಹೋದಾಗ ಧರ್ಮಪ್ಪ ಅಲ್ಲಿ ಇರಲಿಲ್ಲ ನಂಜುಂಡಿ , ವಿನಾಯಕ್ , ಮಲ್ಲೇಶ್ ಮೂವರು ಸೇರಿ ಧರ್ಮಪ್ಪನ ಮನೆಯ ಬಾಗಿಲು ಹೊಡೆದು ಅಳಿಯ ಬಸವರಾಜ ಮನೆಯೆಗೆ ಹೋಗಿ ಗಲ್ಲಾಟೆ ಮಾಡುತ್ತಾರೆ.
ಈ ವೇಳೆ ಇಬ್ಬರು ಯೋಧರ ಮಧ್ಯ ವಾಗ್ವಾದ ನಡೆದು ವಿಕೋಪಕ್ಕೆ ಹೋದಾಗ ಅಕ್ಕಪಕ್ಕದ ಜನರು ಬಂದು ಇಬ್ಬರ ಜಗಳ ಬಿಡುಸುತ್ತಾರೆ ,ಆರೋಪಿ ನಂಜುಂಡಿ ತನ್ನ ಮನೆಯಲ್ಲಿ ಇದ್ದ ಪಿಸ್ತೂಲು ತೆಗದುಕೊಂಡು ಬಂದು ಯೋಧ ನಂಜುಂಡಿ ಯೋಧ ಬಸವರಾಜ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಾಳು ಬಸವರಾಜ ನ್ನು ಕೆ.ಎಲ್ ಇ ಆಸ್ಪತ್ರೆ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್.ಪಿ ಭೀಮಾ ಶಂಕರ್ ಗುಳೇದ ಹೇಳಿದ್ದಾರೆ