

ಬೆಳಗಾವಿ : ಪತ್ರಕರ್ತರಿಗೆ ಪ್ರತಿನಿತ್ಯ ಕಾರ್ಯ ಬಾಹುಳ್ಯ್ ದ ಒತ್ತಡವಿರುತ್ತದೆ ಈ ಮಧ್ಯ
ಆರೋಗ್ಯದ ಕಡೆಗೂ ಅವರು ಗಮನಹರಿಸಬೇಕೆಂದು
ಮೇಯರ್ ಪ್ರೀತಿ ಕಾಮಕರ್ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರ ಆರೋಗ್ಯ ಕಾಪಾಡಲು ಪಾಲಿಕೆ ಕಲ್ಯಾಣ ನಿಧಿ ಅಡಿಯಲ್ಲಿ ರೂ 5, ಲಕ್ಷದ ಆರೋಗ್ಯ ವಿಮಾ ಸೌಲಭ್ಯವುಳ್ಳ ಒಂದು ವರ್ಷ ಅವಧಿಯ ಸ್ಟಾರ್ ಗ್ರೂಪ್ ಹೆಲ್ತ್ ಇನ್ಸೂರೆನ್ಸ್ ಸ್ಕೀಮ ವಿಮಾ ಕಾರ್ಡ್ ಗಳನ್ನು ಪತ್ರಕರ್ತರಿಗೆ ವಿತರಿಸಿ ಅವರು ಮಾತನಾಡಿದರು.
ಉಪಮೇಯರ ಹಣಮಂತ ಕೊಂಗಾಲಿ, ದಕ್ಷಿಣ ಕ್ಷೇತ್ರದ
ಶಾಸಕ ಅಭಯ ಪಾಟೀಲ, ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್, ಆಯುಕ್ತ ಕಾರ್ತಿಕ್ ಎಂ ಅವರು ಮಾತನಾಡಿ, ಪತ್ರಕರ್ತರು ಸದಾ ಆರೋಗ್ಯದಿಂದ ಇರಬೇಕೆಂದು ಹಾರೈಸುತ್ತೇವೆ. ಅನಿವಾರ್ಯ ಕಾರಣಗಳು ತುರ್ತು ಆರೋಗ್ಯ ಸಮಸ್ಯೆಗಳು ಬಂದಾಗ ಮಾತ್ರ ವಿಮೆ ಕಾರ್ಡ್ ಉಪಯೋಗವಾಗಲಿ ಪಾಲಿಕೆಯ ಈ ಸೌಲಭ್ಯ ಸದುಪಯೋಗವಾಗಲಿ ಎಂದು ಹೇಳಿದರು.
ಮುದ್ರಣ ಮಾಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ, ವಿದ್ಯುನ್ಮಾನ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ ಸುಗಂಧಿ, ಹಿರಿಯ ಪತ್ರಕರ್ತ ಮೆಹಬೂಬ್ ಮಕಾನದಾರ ಪಾಲಿಕೆಯ ಕಾರ್ಯವನ್ನು ಶ್ಲಾಘಿಸಿ ಹೂಗುಚ್ಛ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಕೆಲ ಪತ್ರಕರ್ತರಿಗೆ ಕಾರ್ಡಗಳನ್ನು ವಿತರಿಸಲಾಯಿತು. ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ್, ವಿರೋಧ ಪಕ್ಷದ ನಾಯಕ ಸೊಹೈಲ್ ಸಂಗೊಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ನಗರಸೇವಕರು, ಪತ್ರಕರ್ತರ ಸಂಘದ ಪ್ರತಿನಿಧಿಗಳು, ಪಾಲಿಕೆ ಪರಿಸರ ವಿಭಾಗದ ಅಭಿಯಂತರ ಹಣಮಂತ ಕಲಾದಗಿ, ಇನ್ಸೂರೆನ್ಸ್ ಕಂಪನಿ ಪ್ರತಿನಿಧಿ ಶ್ರೀಕಾಂತ್
ಸೇರಿದಂತೆ ಇತರರು ಉಪಸ್ಥಿತರಿದ್ದರು.











