


ಬೆಳಗಾವಿ:
ಸಚಿವ ಸತೀಶ್ ಜಾರಕಿಹೊಳಿ ಕುಟುಂಬ, ಆಪ್ತರ ಮೇಲಿನ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎರಡನೇ ದಿನವೂ ಇಡಿ ಅಧಿಕಾರಿಗಳ ಶೋಧ ಕಾರ್ಯ ಮುಂದುವರೆದಿದೆ.ಸತೀಶ್ ಜಾರಕಿಹೊಳಿ ಬಾಮೈದ ವೈ. ಮಂಜುನಾಥ ಮನೆ ಮೇನೆಯಲ್ಲಿ ಶೋಧಕಾರ್ಯ ಮುಂದುವರೆದಿದ್ದು ಅತ್ತ
ಗೋಕಾಕ ನಗರದ ಸತೀಶ್ ಜಾರಕಿಹೊಳಿ ನಿವಾಸ, ಬೆಳಗಾವಿ ನಗರದ ಆಪ್ತರಾದ ಡಾ. ಗಿರೀಶ್ ಸೋನವಾಲ್ಕರ್ ಮನೆ ಆಪ್ತ ಕಾರ್ಯದರ್ಶಿ ಮಲಗೌಡ ಪಾಟೀಲ ಮನೆಯಲ್ಲೂ ಶೋಧ ಕಾರ್ಯ ಮುಂದುವರೆದಿದೆ.ವಿದೇಶಿ ಅಕ್ರಮ ಹೂಡಿಕೆ ಹಿನ್ನೆಲೆಯಲ್ಲಿ ಪರಿಶೋಧನೆ ತೀವ್ರಗೊಂಡಿದೆ.
ಮತ್ತೊಂದು ಕಡೆ ಅಬಕಾರಿ ಇಲಾಖೆ ಅಪರ ಆಯುಕ್ತ ವೈ ಮಂಜುನಾಥ ಆಪ್ತ ಸಹಾಯಕಿಗೆ ಇಡಿ ಡ್ರಿಲ್ ಶುರು ಮಾಡಿದೆ.ಬೆಳಗಾವಿಯ ಜೇಡ್ ಗಲ್ಲಿಯರುವ ಆಪ್ತ ಸಹಾಯಕಿ ಪ್ರೀತಿ ಕಾಕತ್ಕರ್ ಮನೆ ಮೇಲೆ ಇಡಿ ದಾಳಿ ನಡೆಸಿದೆ.ನಿನ್ನೆ ತಡರಾತ್ರಿ ಪ್ರೀತಿ ಕಾಮಕರ್ ಮನೆಯಲ್ಲಿ ಇಡಿ ಅಧಿಕಾರಿಗಳ ಶೋಧಕಾರ್ಯ ನಡೆದಿದೆ.ರಾತ್ರಿ ಇಡಿ ಪ್ರೀತಿ ಮನೆಯಲ್ಲಿ ಶೋಧಕಾರ್ಯವನ್ನು ಮಹಿಳಾ ಅಧಿಕಾರಿಗಳು ನಡೆಸಿದ್ದಾರೆ.
ವೈ ಮಂಜುನಾಥ ಅವರ ಅಕ್ರಮ ವಹಿವಾಟು ಬಗ್ಗೆ ಮಾಹಿತಿ ಕಲೆ ಹಾಕ್ತಿರುವ ಅಧಿಕಾರಿಗಳು ತಮ್ಮ ತಲಾಷ್ ಮುಂದುವರೆಸಿದ್ದಾರೆ.









