ಬೆಳಗಾವಿ:
ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ ಶಾಕ್ ನೀಡಿದೆ. ಇಂದು ಅವರಿಗೆ ಸಂಬಂಧಿದ ಬೆಳಗಾವಿ,ಗೋಕಾಕ ಹಾಗೂ ಅವರ ಗೃಹ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ದಾಳಿ ನಡೆದಿದ್ದು ಬೆಂಗಳೂರು, ಬೆಳಗಾವಿ, ಮಹಾರಾಷ್ಟ್ರ ಸೇರಿ ಒಟ್ಟು 15 ಕಡೆ ಜಾರಿ ನಿರ್ದೇಶನಾಲಯ ಪರಿಶೀಲನೆ ನಡೆಸಿದೆ ಎನ್ನಲಾಗಿದೆ. ಅವರ ಸಂಬಂಧಿ ಹಾಗೂ ಅಧಿಕಾರಿ ಅಪರ ಆಯುಕ್ತ ಮಂಜುನಾಥ್ ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳಿಂದ ದಿಢೀರ್ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಿದ್ದಾರೆ.18 ಅನಧಿಕೃತ ಬಾರ್ ಲೈಸೆನ್ಸ್ ನೀಡಿ ನೆರವಾಗಿರುವ ಆರೋಪವನ್ನು ಸಚಿವ ಜಾರಕಿಹೊಳಿ ಎದುರಿಸುತ್ತಿದ್ದಾರೆ.ಅಕ್ರಮ ವಿದೇಶಿ ಹಣ ಹೂಡಿಕೆ ಹಾಗೂ ಮನಿ ಲಾಂಡ್ರಿಂಗ್ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆದಿದೆ.ಈ ಹಿಂದೆ ಪತ್ತೆಯಾಗಿದ್ದ 3 ಕೋಟಿ ಅಕ್ರಮ ವಿದೇಶಿ ಹಣಕ್ಕೆ ಸಂಬಂಧಿಸಿದಂತೆಯೂ ಸಹ ಇ.ಡಿ ಅಧಿಕಾರಿಗಳ ತನಿಖೆ ಮುಂದುವರೆದಿದೆ. ಇನ್ನು ವೈ ಮಂಜುನಾಥ ಅವರು ದಕ್ಷಿಣ ಆಪ್ರೀಕಾದಲ್ಲಿ ನಡೆಸುತ್ತಿರುವ ಮೈನಿಂಗ್ ಬ್ಯುಸಿನೆಸ್ ನಲ್ಲಿಯೂ ಸಹ ಸತೀಶ್ ಮಗ ರಾಹುಲ್ ಜಾರಕಿಹೊಳಿ ಪಾಲುದಾರರಾಗಿದ್ದಾರೆ ಎನ್ನುವ ಮಾಹತಿ ದೊರೆತಿದ್ದು ಆ ಹಿನ್ನೆಲೆಯಲ್ಲೂ ಸಹ ದಾಳಿ ನಡೆದಿದೆ ಎಂದು ಅಂದಾಜಿಸಲಾಗಿದೆ.ಸದ್ಯ ಇಡಿ ಅಧಿಕಾರಿಗಳು ಸತೀಶ್ ಜಾರಕಿಹೊಳಿಯವರಿಗೆ ಸಂಬಂದಿಸಿದ ಮನೆ ಗೃಹ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಅವರ ಆಪ್ತರಲ್ಲಿ ಒಬ್ಬರಾದ ಬೆಳಗಾವಿಯ ಡಾ, ಗಿರೀಶ್ ಸೋನವಾಲ್ಕರ್ ಮನೆಯ ಮೇಲೂ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯನ್ನು ನಡೆಸಿದ್ದಾರೆ. ಸದ್ಯ ಅಧಿಕಾರಿಗಳ ದಾಳಿ ಮುಂದುವರೆದಿದ್ದು ಅಧಿಕಾರಿಗಳೇ ದಾಳಿಯ ಕುರಿತು ಅಧಿಕೃತ ಮಾಹಿತಿ ನೀಡಬೇಕಾಗಿದೆ.














