ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯ

ಸತೀಶ್ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನಲಾಗುವುದಿಲ್ಲ! ಲಖನ್ ಅಚ್ಚರಿ ಹೇಳಿಕೆ!

ಬೆಳಗಾವಿ:

ತಮ್ಮ ಸಹೋದರನ ಮೇಲಿನ ದಾಳಿಗೆ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಗೋಕಾಕದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಇಡಿ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸತೀಶ್ ಜಾರಕಿಹೊಳಿಯವರು ಮಂತ್ರಿ ಆಗಿದ್ದು ಅವರದ್ದೇಯಾದ ಉದ್ಯೋಗ ಹಾಗೂ ವ್ಯಾಪಾರ ಇವೆ.ಇಡಿ ಕೇಳಿದ ದಾಖಲೆಗಳನ್ನು ಸತೀಶ್ ಒದಗಿಸಬಹುದು.ಇಡಿಗೆ ಎನು ಮಾಹಿತಿ ಸಿಕ್ಕಿದೆ ಯಾವ ಆಧಾರದ ಮೇಲೆ ದಾಳಿ ಮಾಡಿದೆ ಎಂದು ನಮಗೂ ಮಾಹಿತಿ ಇಲ್ಲ ಎಂದರು ಇನ್ನು ಆಫ್ರೀಕಾದಲ್ಲಿ ಸತೀಶ್ ಹಣ ಹೂಡಿದ ವಿಚಾರವನ್ನು ಮಾಧ್ಯಮಗಳು ಕೇಳಿದಾಗ
ಆ ಕುರಿತು ನಮಗೆ ಮಾಹಿತಿ ಇಲ್ಲ ಎಂದಿದುವ ಲಖನ್ ಜಾರಕಿಹೊಳಿ ರಾಹುಲ್ ಹಾಗೂ ಮಂಜುನಾಥ್ ಅವರ ಪಾರ್ಟರ್ ಶಿಪ್ ಕುರಿತು ಗೊತ್ತಿಲ್ಲ ಎಂದಿದ್ದಾರೆ.
ಇನ್ನು ರಾಜ್ಯಾದ್ಯಂತ ಏಕಕಾಲಕ್ಕೆ ದಾಳಿ ಆಗಿದೆ ಎಂಬ ವಿಚಾರಕ್ಕೆ
15 ಜನರ ಕಡೆ ಆಗಿದೆ ಎಂದು ನಮಗೆ ಗೊತ್ತಿಲ್ಲ ನಾನು ಹೊರಗಿದ್ದೆ ಏನಾಗಿದೆ ಎಂದು ನಾನು ಮಾಹಿತಿ ಇದನ್ನು ಪಡೆಯಬೇಕು ರಾಜಕೀಯ ಷಢ್ಯಂತ್ರ ಎಂದು ಹೇಳಲಾಗುವುದಿಲ್ಲ ಎಂದರು. ಇನ್ನು ಇಡಿ ಬಳಸಿಕೊಂಡು ದಲಿತ ನಾಯಕರನ್ನು ಬಿಜೆಪಿ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಿಎಂ ಡಿಕೆಶಿಯವರಿಗೆ ಆ ಕುರಿತು ಮಾಹಿತಿ ಇರಬಹುದು ಅವರು ಹೇಳಿರಬಹುದು ಎಂದರು. ಇನ್ನು ನಾನು ಸತೀಶ್ ಆಗಲಿ ಪ್ರೀಯಾಂಕಾ ಅವರ ಜೊತೆಗಾಗಲಿ ಮಾತನಾಡಿಲ್ಲ ಎಂದು ಲಖನ್ ಜಾರಕಿಹೊಳಿ‌ ಹೇಳಿದರು.

TV24 News Desk
the authorTV24 News Desk

Leave a Reply

error: Content is protected !!