ಬೆಳಗಾವಿ:
ಕಾಂಗ್ರೆಸ್ ವಿರುದ್ಧ ಬಿಜೆಪಿ ನಡೆಸುತ್ತಿರುವ “ಬಳ್ಳಾರಿ ಚಲೋ” ಪಾದಯಾತ್ರೆಯಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ ಬೆಳಗಾವಿಯ ಮುತಗಾದಿಂದ ಬಳ್ಳಾರಿಗೆ ಹೋಗಲು ಸಜ್ಜಾಗಿ ನಿಂತಿಸ್ದ ಬಿಜೆಪಿ ಕಾರ್ಯಕರ್ತ ಮಹಾವೀರ ಗುಡಾಜ(52) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಮಹಾವೀರ ಅವರು ರಸ್ತೆಯ ಒಂದು ಬದಿಯಲ್ಲಿದ್ದ ಸಮಯದಲ್ಲಿ ಬೆಳಗ್ಗೆ 5-30 ಕ್ಕೆ ನಿಂತಿದ್ದಾಗ ಅನಾಮಧೇಯ ದ್ವಿಚಕ್ರ ವಾಹನ ಸವಾರನೋರ್ವ ನಿಷ್ಕಾಳಜಿಯಿಂದ ಬಂದು ರಭಸವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಗಂಭೀರಗಾಯಗೊಂಡ ಮಹಾವೀರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಕಿತ್ಸೆ ನೀಡಲಾದರೂ ಸಹ ಚಿಕಿತ್ಸೆ ಫಲಿಸಲದೆ ಮಹಾವೀರ ಈಹಲೋಕ ತ್ಯಜಿಸಿದ್ದಾರೆ.
ಮಹಾವೀರ ಗುಡಾಜ ಇವರು ಬಿಜೆಪಿಯ ಬೂತ್ ಮಟ್ಟದಿಂದ ಹಿಡಿದು ಮಂಡಲ ಹಾಗೂ ಜಿಲ್ಲೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು, ಪ್ರಸ್ತುತ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಯಾಗಿ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು, ಮೃತ ಕಾರ್ಯಕರ್ತನ ಕುಟುಂಬದ ಸದ್ಯ ಅನಾಥವಾಗಿದ್ದು ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯಲ್ಲಿ ಘಟನೆ ನಡೆದಿದೆ.











