ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಗಣೇಶೋತ್ಸವದಲ್ಲಿ ಬಾಲ‌ ಬಿಚ್ಚಿದ್ರೋ ಹುಷಾರ್! ನೂತನ ಕಮಿಷ್ನರ್ ಪ್ರಕಾಶ್ ನಿಕಂ!

ಬೆಳಗಾವಿ:

ಬೆಳಗಾವಿಯಲ್ಲಿ ಜರುಗುವ ಅದ್ಧೂರಿ ಗಣೇಶೋತ್ಸವಕ್ಕೆ ಖಾಕಿ ಕಟ್ಟೆಚ್ಚರ ವಹಿಸಿದದೆ.ಗಣೇಶೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿಯ ರೌಡಿ ಶೀಟರ್ ಪರೇಡ್ ನಡೆಸಲಾಗಿದೆ‌.ಬೆಳಗಾವಿಯಲ್ಲಿ ಬೆಳಂ ಬೆಳಗ್ಗೆ ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದ್ದು ಗಣೇಶೋತ್ಸವಕ್ಕೂ ಮುನ್ನ ರೌಡಿಗಳಿಗೆ ಪೊಲೀಸ್ ವಾರ್ನಿಂಗ್ ನೀಡಿದ್ದಾರೆ. ಬೆಳಗಾವಿ ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಸಿದ ನೂತನ ಕಮಿಷನರ್ ಪ್ರಕಾಶ್ ನಿಕಮ್ ರೌಡಿಗಳ ಪರೇಡ್ ನಡೆಸಿ ಗಣೇಶೋತ್ಸವ ಹಿನ್ನೆಲೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಪರೇಡ್ ನಲ್ಲಿ ಸುಮಾರು 125ಕ್ಕೂ ಹೆಚ್ಚು ರೌಡಿಶೀಟರ್‌ಗಳು ಭಾಗಿಯಾಗಿದ್ದರು. ಇನ್ನು ರೌಡಿಗಳ ಚಲನವಲನದ ಬಗ್ಗೆ ಇಲಾಖೆಯ ಪೊಲೀಸರಿಂದ ಕಮಿಷನರ್ ಮಾಹಿತಿ ಪಡೆದುಕೊಂಡುಕೊಂಡರು..ಸಕ್ರಿಯ ರೌಡಿಶೀಟರ್‌ಗಳನ್ನು ಮಾತ್ರ ಕರೆಸಿ ಕಮಿಷನರ್ ಖಡಕ್ ವಾರ್ನಿಂಗ್ ನೀಡಿದ್ದು ಗಣೇಶೋತ್ಸವದ ವೇಳೆ ಬಾಲ ಬಿಚ್ಚದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದರುನಗರ ವ್ಯಾಪ್ತಿಯ ರೌಡಿಶೀಟರ್‌ಗಳ ಮೇಲೆ ಪೊಲೀಸರು ಕಣ್ಣಿರಿಸಿದ್ದು ಬೆಳಗಾವಿ ನಗರದ ಮಾರ್ಕೆಟ್, ಮಾಳಮಾರುತಿ, ಎಪಿಎಂಸಿ, ಕ್ಯಾಂಪ್ ಠಾಣೆ ಸೇರಿದಂತೆ ಬೆಳಗಾವಿ ಗ್ರಾಮೀಣ, ಶಾಹಾಪುರ, ಉದ್ಯಮಬಾಗ್, ಮಾರಿಹಾಳ ಠಾಣಾ ವ್ಯಾಪ್ತಿಯ ರೌಡಿಗಳಿಗೂ ಸಹ ಪೊಲೀಸರು ಬಿಸಿ ಮುಟ್ಟಿಸಿದರು. ಗಣೇಶೋತ್ಸವದ ನೆಪದಲ್ಲಿ ಅಶಾಂತಿ ಸೃಷ್ಟಿಸಿದ್ರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೆವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು ರೌಡಿಗಳ ಚಲನವಲನದ ಮೇಲೆ ಬೆಳಗಾವಿ ಪೊಲೀಸರು ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!