ಜಿಲ್ಲೆಬೆಳಗಾವಿಬೆಳಗಾವಿ ನಗರ

ಬೋರಸೆ ವರ್ಗಾವಣೆಗೆ ಸಾಹುಕಾರ್ ತಡೆ! ವರ್ಗಾವಣೆ ಮಾಡುವಂತೆ ಸಿಎಂ ತಲೆ ತುಂಬಿದ್ಯಾರು!

ಬೆಳಗಾವಿ:

ಕುಂದಾನಗರಿ ಬೆಳಗಾವಿಯಲ್ಲಿ ಮತ್ತೇ ವರ್ಗಾವಣೆ ದಂಗಲ್ ಶುರುವಾಗಿದೆ.ರಾಜ್ಯ ಸರ್ಕಾರದಿಂದ ಬೆಳಗಾವಿಯ ಖಡಕ್ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.ಬೆಳಗಾವಿಯ ಪೊಲೀಸ್ ಅಧಿಕಾರಿಯ ವರ್ಗಾವಣೆ ಆದೇಶವನ್ನೇ ಸಚಿವ ಸತೀಶ್ ಜಾರಕಿಹೊಳಿ‌ ತಡೆ ಹಿಡಿದಿದ್ದಾರೆ.ಹೀಗಾಗಿ ಈ ವಾರ್ಗಾವಣೆ ಪ್ರಕರಕಣ ಹೊಸ ಸರ್ಕಾರಕ್ಕೆ ಹೊಸ ತಲೆನೋವಾಗಿದೆ‌ ಎನ್ನಲಾಗಿದೆ.
ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಗಮನಕ್ಕೆ ತರದೇ ಐಪಿಎಸ್ ಅಧಿಕಾರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಭೂಷಣ್ ಬೋರಸೆ ಜಾಗಕ್ಕೆ ಪ್ರಕಾಶ ನಿಕ್ಕಂ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಭೂಷಣ್ ಬೋರಸೆ ಅವರನ್ನು ವರ್ಗಾಯಿಸಿತ್ತು.ಸಿಎಂ ಡಿಕೆ ಶಿವಕುಮಾರ್ ನಿರ್ದೇಶನ ಮೇರೆಗೆ ಬೆಳಗಾವಿಗೆ ಪ್ರಕಾಶ ನಿಕ್ಕಂ ವರ್ಗ ಮಾಡಲಾಗಿತ್ತು.
ಸಿಎಂ ಡಿಕೆಶಿ ಜೊತೆಗೆ ಮಾತನಾಡಿ ವರ್ಗಾವಣೆ ಆದೇಶವನ್ನು ಸಚಿವ ಸತೀಶ್ ಜಾರಕಿಹೊಳಿ ತಡೆ ಹಿಡಿದಿದ್ದಾರೆ ಎನ್ನಲಾಗಿದೆ.ಯಾರ ಮಾತು ಕೇಳಿ ಸಿಎಂ ಡಿಕೆಶಿ ಐಪಿಎಸ್ ಅಧಿಕಾರಿ ವರ್ಗ ಮಾಡಿದ್ರು ಎನ್ನುವ ಕುರಿತು ಈಗ ಬೆಳಗಾವಿಯಲ್ಲಿ ಚರ್ಚೆ ತೀವ್ರಗೊಂಡಿದೆ.ಈ ವರ್ಷಾಂತ್ಯದವರೆಗೆ ಭೂಷಣ್ ಬೋರಸೆ ಮುಂದುವರೆಸಲು ಸತೀಶ್ ಜಾರಕಿಹೊಳಿ‌ ಒಲವು ತೋರಿಸಿದ್ದು ಬೆಳಗಾವಿಯಲ್ಲಿ ಡ್ರಗ್ಸ್, ಮಟ್ಕಾ ಸೇರಿ ಅಕ್ರಮ ಚಟುವಟಿಕೆಗಳಿಗೆ ಭೂಷಣ್ ಬೋರಸೆ ಬ್ರೇಕ್ ಹಾಕಿ ಖಡಕ್ ಆಫೀಸರ್ ಎನ್ನಿಸಿಕೊಂಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!