



ಬೆಳಗಾವಿ:
ಸರ್ಕಾರ ರಸ್ತೆಗಳ ಅಭಿವೃದ್ದಿಗೆ ಅಂತ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ರಸ್ತೆಗಳ ಗುಣಮಟ್ಟ ಮಾತ್ರ ಸರಿಯಾಗಿಲ್ಲ ಅದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದ ರಸ್ತೆಗಳು.ಕಾಂಗ್ರೇಸ್ ಶಾಸಕ ಬಾಬಾಸಾಹೇಬ್ ಪಾಟೀಲ ಪ್ರತಿನಿಧಿಸುವ ಕಿತ್ತೂರು ಕ್ಷೇತ್ರದಲ್ಲಿ ಕೋಟಿ ಕೋಟಿ ಖರ್ಚು ಮಾಡಿದ ರಸ್ತೆ ಈಗ ತೆಗ್ಗು ಗುಂಡಿ,ಕಳಪೆ ಮಟ್ಟದ್ದಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದ ವ್ಯಾಪ್ತಿಗೆ ಬರುವ ಚಿಕ್ಕಬಾಗೇವಾಡಿ ಗ್ರಾಮದಲ್ಲಿನ ರಸ್ತೆಯನ್ನು 3 ಕೋಟಿ 4 ಲಕ್ಷದ 80 ಸಾವಿರ ರೂಗಳಲ್ಲಿ ನಿರ್ಮಿಸಲಾಗಿತ್ತು.ಚಿಕ್ಕಬಾಗೇವಾಡಿ ಗ್ರಾಮದಿಂದ ಎಂಕೆ ಹುಬ್ಬಳ್ಳಿ ಹದ್ದಿನವರೆಗೆ ರಸ್ತೆ ಸಂಪೂರ್ಣ ಕಳಪೆ ಆರೋಪ ಕೇಳಿ ಬಂದಿದೆ.ರಸ್ತೆ ಉದ್ಘಾಟನೆ ಆಗಿ ಒಂದು ವರ್ಷ ಕಳೆದಿಲ್ಲಾ ಅದೇ ರಸ್ತೆಯಲ್ಲಿ ಈಗ ತೆಗ್ಗು ಗುಂಡಿಗಳ ದರ್ಬಾರ್ ಶುರುವಾಗಿದೆ.ಕ್ವಾಲಿಟಿ ರಿಪೋರ್ಟ್ ನೋಡದೆ ರಸ್ತೆ ಬಿಲ್ ಗೆ ಅಧಿಕಾರಿಗಳು ಸಹಿ ಹಾಕಿದ್ರಾ ಎಂಬ ಪ್ರಶ್ನೆಗಳು ಮೂಡಿದ್ದು ಶಾಸಕ ಬಾಬಾಸಾಹೇಬ್ ಪಾಟೀಲ ಅವರ ಮತಕ್ಷೇತ್ರದಲ್ಲಿ ರಸ್ತೆ ಕಳಪೆ ಮಟ್ಟದಿಂದ ಕೂಡಿರುವ ಆರೋಪ ಬಂದಿದೆ.ಬಿಕೆ ಮಟಗಾರ ಎನ್ನುವ ಗುತ್ತಿಗೆದಾರ ಮಾಡಿದ ರಸ್ತೆ ಸಂಪೂರ್ಣ ಕಳಪೆ ಮಾಡಲಾಗಿದ್ದು ರೈತರು ಹಾಗೂ ವಾಹನಗಳ ಓಡಾಡುವ ಮಧ್ಯೆ ನೂತನ ರಸ್ತೆ ಈಗ ತೆಗ್ಗು ಗುಂಡಿಗಳಿಂದ ಕೂಡಿದೆ.ನೂತನ ರಸ್ತೆ ಈಗ ತೆಗ್ಗು ಗುಂಡಿಗಳಿಂದ ಕೂಡಿದ ಹಿನ್ನಲೆ ಕೋಟಿ ಕೋಟಿ ಹಣ ನೀರಲ್ಲಿ ಹೋಮ ಮಾಡಿದ ಹಾಗಾಗಿದ್ದು ಗುಣಮಟ್ಟದ ರಸ್ತೆ ಮಾಡದೆ ತೆಗ್ಗು ಗುಂಡಿಗಳ ರಸ್ತೆ ಮಾಡಿದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುವಂತಾಗಿದೆ.











