

ಬೆಳಗಾವಿ:
ಬರೊಬ್ಬರಿ ಒಂಭತ್ತು ಪ್ರಕರಣಗಳಲ್ಲಿ ಆರೋಪಿಯಾಗಿದ್ದವನ ಹದ್ದು ಮೀರಿದ ವರ್ತನೆಗೆ ಪೊಲೀಸರು ಅಂಕುಷ ಹಾಕಿದ್ದಾರೆ.ಅಪರಾಧ ಕೃತ್ಯಗಳಲ್ಲಿ ಪದೇ ಪದೇ ಭಾಗಿಯಾಗಿ ಬಾಲ ಬಿಚ್ಚುತ್ತಿದ್ದ ಆರೋಪಿಗೆ ಬರೊಬ್ಬರಿ 1 ವರ್ಷ ಜೈಲು ಶಿಕ್ಷೆ ಕೊಡಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.ಗೂಂಡಾ ಕಾಯ್ದೆಯಡಿ ಒಂದು ವರ್ಷ ಬಂಧಿಸುವಂತೆ ಆರೋಪಿಗೆ ಬೆಂಗಳೂರಿನ ಉಚ್ಛ ನ್ಯಾಯಾಲಯದ ಆದೇಶ ನೀಡಿದೆ.ಆರೋಪಿಯನ್ನು ಒಂದು ವರ್ಷ ಬಂಧಿಸುವಂತೆ ಉಚ್ಛನ್ಯಾಯಾಲಯ ಆದೇಶ ಮಾಡಿದ್ದು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದು ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಹವಾ ಕ್ರಿಯೇಟ್ ಮಾಡಲು ಮುಂದಾಗಿದ್ದ ಬಾಳೇಶ್ ಹೊಂಡಪ್ಪನವರ್(26) ಎಂಬ ರೌಡಿ ಶೀಟರನನ್ನು ಮುರುಗೋಡ ಪೊಲೀಸರು ಬಂಧಿಸಿದ್ದಾರೆ.ಕೋರ್ಟ್ ಆದೇಶದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಈತ
ಬೆಳಗಾವಿಯ ವಿವಿಧ ಠಾಣೆಗಳಲ್ಲಿ 9 ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಬೆಳಗಾವಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ
ಕೊಲೆ, ಹನಿ ಟ್ರ್ಯಾಪ್,ರಾಬರಿ ಕೋಟಾನೋಟು ಚಾಲಾವಣೆ ಪ್ರಕರಣಗಳು ದಾಖಲಿವೆ.ಸಧ್ಯ ಬೇಲ್ ಮೇಲೆ ಹೊರಗಿದ್ದ ಆರೋಪಿ ಬಾಳೇಶ್
ಇನ್ಸಟಾಗ್ರಾಮ್ ನಲ್ಲೂ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಪೋಸ್ಟ್ ಹಾಕಿದ್ದ ಹೀಗಾಗಿ ಮುರುಗೋಡ ಪೊಲೀಸರು ಆರೋಪಿಯ ಚಟುವಟಿಕೆಯ ಮೇಲೆ ಕಣ್ಣಿಟ್ಟು ಸಾರ್ವಜನಿಕರ ಹಿತಾಸಕ್ತಿಗೆ ಭಂಗ ತರುವ ವರ್ತನೆ ತೋರಿದ್ದರ ಕುರಿತಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈ ಕೋರ್ಟ್ ಆರೋಪಿಯನ್ನು ಒಂದು ವರ್ಷ ಜೈಲಿಗಟ್ಟುವಂತೆ ಆದೇಶ ನೀಡಿದೆ.ಸದ್ಯ ಮುರುಗೋಡ ಪೊಲೀಸರು ಆರೋಪಿ ಬಾಳೇಶನನ್ನು ಬಂಧಿಸಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಅಟ್ಟಿದ್ದಾರೆ.










