

ಬೆಳಗಾವಿ:
ಬೆಳಗಾವಿಯಲ್ಲಿ ಪೊಲೀಸ್ ಶ್ವಾನಗಳ ಭರ್ಜರಿ ಸ್ಪರ್ಧೆ ಹಾಗೂ
ಪೊಲೀಸ್ ಕವಾಯತು ನಡೆಯಿತು.ಬೆಳಗಾವಿಯ ಎಸ್ಪಿ ಮೈದಾನದಲ್ಲಿ ಶ್ವಾನಗಳ ತರಬೇತಿ ಸಾಮರ್ಥ್ಯಾ ಪರೀಕ್ಷೆ ನಡೆಸಲಾಯ್ತು.ಉತ್ತರ ವಲಯ ವ್ಯಾಪ್ತಿಯ 6 ಜಿಲ್ಲೆಗಳ ಪೊಲೀಸ್ ಶ್ವಾನಗಳು ಕವಾಯತನಲ್ಲಿ ಭಾಗಿಯಾಗಿದ್ದವು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಗದಗದ ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಮುದೋಳ, ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಬೆಲ್ಜಿಯಂ ಮೆಲಿನಾಯಿಸ್ ಸೇರಿದಂತೆ ವಿವಿಧ ತಳಿಗಳ 18ಕ್ಕೂ ಹೆಚ್ಚು ಪೊಲೀಸ್ ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.
ಪೊಲೀಸ್ ಶ್ವಾನಗಳ ತರಬೇತಿಯ ಗುಣಮಟ್ಟ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದ್ದು ನಾಯಿಗಳು ತರಬೇತಿಯಲ್ಲಿ ಎಷ್ಟು ಪಳಗಿವೆ ಎಂಬುದನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.ಆರು ವಿಭಾಗಗಳಲ್ಲಿ ಶ್ವಾನಗಳ ಸಾಮರ್ಥ್ಯದ ಕಠಿಣ ಪರೀಕ್ಷೆ ಓಬಿಡಿಯನ್ಸ್, ವಾಸನೆ ಪತ್ತೆ, ಬಾಡಿ ಸರ್ಚಿಂಗ್, ನಾರ್ಕೋಟಿಕ್ಸ್ ಪತ್ತೆ, ಟ್ರ್ಯಾಕಿಂಗ್, ಗ್ರೌಂಡ್ ಸರ್ಚಿಂಗ್ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.ಸ್ಪರ್ಧೆತಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಪೊಲೀಸ್ ಶ್ವಾನಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದ್ದು ಅಪರಾಧ ಪತ್ತೆಯಲ್ಲಿ ಪೊಲೀಸ ನಾಯಿಗಳ
ಸಾಮರ್ಥ್ಯ ಎಷ್ಟಿದೆ ಎಂಬುದರ ಪ್ರದರ್ಶನ ಇದಾಗಿತ್ತು.












