ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಹಾಡುಹಗಲೇ ವೃದ್ದೆಯ ಚಿನ್ನದ ಸರ ಕದ್ದ ಸರಗಳ್ಳರು! ಅಜಂ ನಗರದಲ್ಲಿ ಘಟನೆ.

ಬೆಳಗಾವಿ: ಬೆಳಗಾವಿಯ ಅಜಮ್ ನಗರದಲ್ಲಿ ಹಾಡಹಗಲೇ ವೃದ್ಧೆಯ ಸರಗಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಪದ್ಮಜಾ ಕುಲಕರ್ಣಿ (75) ಎಂಬ ವೃದ್ಧೆ ಮೊಮ್ಮಗನ ಜೊತೆ ಇಂದು ಮಧ್ಯಾಹ್ನ 3-4 ಗಂಟೆ ಸುಮಾರಿಗೆ ಕೆ ಎಲ್ ಇ ಆಸ್ಪತ್ರೆಯ ಹಿಂಬದಿಯ ರಸ್ತೆಯ ಮೇಲೆ ವಾಕಿಂಗ್ ಮಾಡುತ್ತಿದ್ದರು, ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಕಳ್ಳರು ಪದ್ಮಜಾ ಕುಲಕರ್ಣಿ ಕೊರಳಲ್ಲಿ ಇದ್ದ 35 ಗ್ರಾಮ್ ತೂಕದ ಚಿನ್ಮದ ಸರ ಎಗರಿಸಿ ಪರಾರಿಯಾಗಿದ್ದಾರೆ.‌

ಕಳ್ಳರ ಚಿನ್ನದ ಸರ ಕಿತ್ತು ಪರಾರಿಯಾದ ಸಂಧರ್ಬದಲ್ಲಿ ನೆಲಕ್ಕೆ ಉರುಳಿದ ವೃದ್ಧಯೆ ಕತ್ತಿಗೆ, ಮೊಣಕೈ ಹಾಗೂ ಕಾಲಿಗೆ ಗಾಯವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಘಟನೆ ನಡೆದ ಪ್ರದೇಶದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಬಲೆ ಬಿಸಿದ್ದಾರೆ.

TV24 News Desk
the authorTV24 News Desk

Leave a Reply