ಜಿಲ್ಲೆಬೆಳಗಾವಿ

ಗೋಕಾಕ ನಗರದ ಶಾಲಾ ಕಾಲೇಜುಗಳಿಗೆ 9 ದಿನ ರಜೆ: ಜಿಲ್ಲಾಧಿಕಾರಿಗಳ ಆದೇಶ

ಬೆಳಗಾವಿ:

10 ವರ್ಷಗಳ ನಂತರ ನಡೆಯುತ್ತಿರುವ ಗೋಕಾಕ ಗ್ರಾಮದೇವಿ ಜಾತ್ರೆಯ ನಿಮಿತ್ಯ ಇದೇ 30/06/2025 ರಿಂದ 8/07/2025 ರವರೆಗೆ ಗೋಕಾಕ ನಗರದ ಎಲ್ಲಾ ಶಾಲಾ ಕಾಲೇಜು‌ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ನೀಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. 10 ವರ್ಷಗಳ‌ ನಂತರ ವಿಜೃಂಬಣೆಯ ಜಾತ್ರೆಯ ನಿರೀಕ್ಷೆಯಲ್ಲಿರುವ ಗೋಕಾಕ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಮತ್ತು ‌ಜಾತ್ರೆಯಲ್ಲಿ ಯಾವುದಾದೇ ಅಹಿತಕರ ಘಟನೆ ‌ನಡೆಯದಿಲಿ ಎಂದು‌ ಮುಂಜಾಗೃತಾ ಕ್ರಮವಾಗಿ ಗೋಕಾಕ ನಗರದ ಶಾಲಾ ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ‌ ನೀಡಲಾಗಿದೆ. ಅಲ್ಲದೆ ಗೋಕಾಕ ಜಾತ್ರಾ ಮಹೋತ್ಸವದ ಅಂಗವಾಡಿ ಭದ್ರತೆಗಾಗಿ 2000 ಸಾವಿರ ಜನ ಪೊಲೀಸರು ನಿಯೋಜನೆಯಾಗಿದ್ದು ಶಾಲಾ ಕಾಲೇಜುಗಳನ್ನು‌ ಪೊಲೀಸರ ವಸತಿಗಾಗಿ ಬಳಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಗೋಕಾಕ ನಗರದ ಎಲ್ಲಾ ಶಾಲಾ ಕಾಲೇಜು‌ ಮತ್ತು ಅಂಗನವಾಡಿಗಳಿಗೆ 9 ದಿನ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

TV24 News Desk
the authorTV24 News Desk

Leave a Reply