ಬೆಳಗಾವಿಬೆಳಗಾವಿ ನಗರ

ಪ್ಯಾಟ್ಸನ್ ಚೀಟ್ಸ್ ಹಾಗೂ ಸೊಸೈಟಿ ವತಿಯಿಂದ ರಕ್ತದಾನ ಶಿಬಿರ ಆಯೋಜನೆ

ಬೆಳಗಾವಿ: ರೋಟರಿ ಕ್ಲಬ್‌ ಆಫ್ ಬೆಳಗಾವಿ ದರ್ಪಣ ಹಾಗೂ ಪ್ಯಾಟ್ಸನ್ ಚೀಟ್ಸ್ ಹಾಗೂ ಸೊಸೈಟಿ ವತಿಯಿಂದ ಬೆಳಗಾವಿಯ ಗಾಂಧಿ ಭವನದಲ್ಲಿ ರಕ್ತದಾನ ಶಿಬಿರ ಆಯೋಜನೆ  ಮಾಡಲಾಗಿತ್ತು. 
 
ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಅತಿಥಿಗಳಿಗೆ ಕಾಣಿಕೆ ನೀಡಿ ಸನ್ಮಾನಿಸಲಾಯಿತು. 
 
ಈ ವೇಳೆ ಮಾತನಾಡಿ ಡಾ. ವಿಕೆ ತೆಲಸಂಗ ಅವರು, ಆರೋಗ್ಯವಂತ ಮಹಿಳೆಯರು, ಹಾಗೂ ಪುರುಷರು ರಕ್ತ ದಾನ ಮಾಡಬಹುದು, 18-60 ಒಳಗಿನ ವಯಸ್ಸಿನವರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವಾಗ 300 ಎಂಎಲ್ 6-8 ಅವಧಿಯಲ್ಲಿ ತಗೆದುಕೊಳ್ಳುಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಪುರುಷರು ಹಾಗೂ ನಾಲ್ಕು ತಿಂಗಳಿಗೊಮ್ಮೆ ಮಹಿಳೆಯರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವಾಗ ಯಾವುದೇ ರೋಗಗಳು ಇರಬಾರದು. ಒಬ್ಬ ರಕ್ತ ದಾನಿಯು ಮೂರು ಜನರ ಪ್ರಾಣ ಉಳಿಸಬಹುದು ಎಂದು ತಿಳಿಸಿದರು. 
 
ಬಳಿಕ ಮಾತನಾಡಿದ ಶರದ ಕವಟಗಿಮಟ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡಬೇಕು, ಜಗತ್ತಿನಾದ್ಯಂತ ರಕ್ತದಾನ ಅವಶ್ಯಕತೆ ಇದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ ಮೂರು ಜನರ ಪ್ರಾಣ ಉಳಿಸಬಹುದು. ಸಹಕಾರ ಕ್ಷೇತ್ರದಲ್ಲಿ ಅಶೋಕ ಪಾಟೀಲ ಸಾಧನೆ ಅನನ್ಯ ಎಂದು ತಿಳಿಸಿದರು. 
 
ಡಾ. ದೇವೇಗೌಡ ಅವರು ಮಾತನಾಡಿ, ರಕ್ತದಾನ ಮಾಡುವುದು ಸಾಮಾಜೀಕ ಸೇವೆ ಆಗಿದೆ. ನಾವು ರಕ್ತದಾನ ಮಾಡುವುದು ನಮಗೆ ಅದರಿಂದ ಸಾಹಾಯ ಆಗಲಿದೆ. ರಕ್ತದಾನ ಮಾಡುವುದರಿಂದ 48 ಗಂಟೆಯಲ್ಲೆ ಮತ್ತೆ ರಕ್ತ ಸಂಗ್ರಹ ದೇಹದಲ್ಲಿ ಹೆಚ್ಚಾಗಲಿದೆ. ರಕ್ತದಾನ ಮಾಡಲು ವ್ಯಕ್ತಿ ಸಕ್ಷಮ ಆದರೆ ಅವಶ್ಯಕವಾಗಿ ರಕ್ತದಾನ ಮಾಡಬೇಕು ಎಂದು ತಿಳಿಸಿದರು.
 
ಮುಖ್ಯ ಅತಿಥಿಯಾಗಿ ಬಿಮ್ಸ್ ಆಡಳಿತಾಧಿಕಾರಿ  ಡಾ. ಪುಷ್ಪಾ ಎಂ.ಜಿ ಅವರು ಮಾತನಾಡಿ, ಅಪಘಾತಕ್ಕೆ ಒಳಗಾಗುವ ವ್ಯಕ್ತಿಗೆ ಸರಿಯಾದ ಸಮಯಕ್ಕೆ ರಕ್ತ ದೊರಕಿದರೆ ವ್ಯಕ್ತಿಯ ಪ್ರಾಣಕ್ಕೆ ಯಾವುದೇ ಹಾನಿ ಆಗುದಿಲ್ಲ. ಬಿಮ್ಸ್ ನಲ್ಲಿ 1200-1500 ಯುನಿಟ್ ರಕ್ತ ಹಾಕಲಾಗುತ್ತದೆ. ಆದ್ರು ಸಹಿತ ಆಸ್ಪತ್ರೆಯಲ್ಲಿ ರಕ್ತದ ಪೂರೈಕೆ ಆಗುತ್ತಿಲ್ಲ.‌ ಒಬ್ಬ ರಕ್ತದಾನಿ ಮಾಡಿ ಮೂರು ಜನರ ಪ್ರಾಣ ಉಳಿಸಬಹುದು. ಜನರು ಸ್ವಯಂ ಪ್ರೇರಿತವಾಗಿ ರಕ್ತ ದಾನ ಮಾಡಬೇಕು. ಸ್ವಯಂ ಪ್ರೇರಿತ ರಕ್ತದಾನ ಜನರಿಗೆ ಪ್ರೇರಣೆ ಆದರೆ ಹೆಚ್ಚು ಹೆಚ್ಚು ರಕ್ತದಾನ ಮಾಡಲು ಬರಲಿದ್ದಾರೆ. ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚು, ಆರ್ಟಿಎ ಗಳಿಗೆ ಎರಡನೇ ಹೆಚ್ಚು ರಕ್ತ ಅವಶ್ಯಕತೆ ಇರಲಿದೆ. ರಕ್ತದಾನ ಮಾಡುವುದರಿಂದ ರೋಗಗಳು ಕಡಿಮೆ ಆಗಲಿದೆ. ಹಳೆ ರೋಗಗಳು ಇದರಿಂದ ಕಡಿಮೆ ಆಗಲಿದೆ. ರಕ್ತದಾನದಿಂದ ಹೃದಯ ರೋಗ ಸಂಬಂಧಿ ಕಾಯಿಲೆಗಳು ಕಡಿಮೆ ಆಗಲಿದೆ ಎಂದು ಅವರು ತಿಳಿಸಿದರು.
 
ಈ ಸಂದರ್ಭದಲ್ಲಿ  ಪ್ಯಾಟ್ಸನ್ ಚೇರಮನ್ ಅನಿಲ ಪಾಟಿಲ್, ಅರ್ ಕೆ ಪಾಟೀಲ, ಆಶಾ ಪಾಟೀಲ್, ವಿನಯ ಪಾಟೀಲ, ಡಾ. ಸ್ಪೂರ್ತಿ, ರೂಪಾಲಿ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply