Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ವಂಚನೆ ಹಣ ಮರಳಿ ಕೊಡಿಸಿದ CEN ಪೊಲೀಸರು..!

ವಂಚಕರ 72.50000 ಅಕೌಂಟ್ ಫ್ರಿಜ್ ಮಾಡಿಸಿದ CEN ಪೊಲೀಸರು  
 
ಬೆಳಗಾವಿ: ದೇಶದಲ್ಲಿ ಸೈಬರ್ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಸೈಬರ್ ದರೋಡೆಕೋರರು ವಿವಿಧ ತಂತ್ರಗಳ ಮೂಲಕ ಜನರ ನಿದ್ದೆಗೆಡಿಸಿದ್ದಾರೆ.ಜಿಲ್ಲೆಯ ಇಬ್ಬರು ವಿದ್ಯಾವಂತ ಮಹಿಳೆಯರಿಗೆ ಇನ್ವೆಸ್ಟಮೆಂಟ್ ಹೆಸರಿನಲ್ಲಿ ಲಕ್ಷ-ಲಕ್ಷ ಹಣ ವಂಚಿಸಿತ್ತು. ಇದೀಗ ಬೆಳಗಾವಿಯ ಸಿಇಎನ್ ಪೊಲೀಸರು ಖರ್ತನಾಕ್ ಸೈಬರ್ ವಂಚಕರ ಜಾಲ ಪತ್ತೆ ಮಾಡಿ ಬರೋಬ್ಬರಿ 46 ಲಕ್ಷ‌ ರೂ. ಮರಳಿ ಕೊಡಿಸಿದ್ದಾರೆ. ಉತ್ತರ ಭಾರತ
 
ಟೆಲಿಗ್ರಾಂ ಚಾಟಿಂಗ್ ನಲ್ಲಿ ಮೊದಲು ಸಂಪರ್ಕಿಸುವ ಖದೀಮರು, ಆ ಬಳಿಕ ಒಳ್ಳೆಯ ಇನ್ವೆಸ್ಟಮೆಂಟ್ ಪ್ಲಾನ್ ಹೇಳಿ ನಂಬಿಕೆ ಗಳಿಸುತ್ತಾರೆ. ಮೊದಲು 3 ಇನ್ವೆಸ್ಟಮೆಂಟ್ ಮೇಲೆ ಒಳ್ಳೆಯ ರಿಟರ್ನ್ಸ್ ಕೂಡ ಕೊಡುತ್ತಾರೆ. ನಂತರ ಲಕ್ಷಾಂತರ ರೂಪಾಯಿ ಇನ್ವೆಸ್ಟಮೆಂಟ್ ಮಾಡವಂತೆ ನಂಬಿಸಿ ಮೋಸ ಮಾಡುತ್ತಾರೆ. ಇದೇ ಮಾದರಿಯಲ್ಲೇ ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾವಂತ ಮಹಿಳೆಯರಿಗೆ ವಂಚಿಸಿದ್ದಾರೆ.
 
ಜಿಲ್ಲೆಯ ರಾಯಬಾಗ ನಿವಾಸಿ ಡಾ. ಶಿಲ್ಪಾ, ನಿಪ್ಪಾಣಿ ನಿವಾಸಿ ಆಶಾ ಎನ್ನುವರಿಂದ ಟೆಲಿಗ್ರಾಂ ಇನ್ವೆಸ್ಟಮೆಂಟ್​ನಲ್ಲಿ ಬರೋಬ್ಬರಿ 46 ಲಕ್ಷ‌ ರೂ. ವಂಚಿಸಿದ್ದಾರೆ. ಡಾ.ಶಿಲ್ಪಾ 27ಲಕ್ಷ 74 ಸಾವಿರ ಹಾಗೂ ಆಶಾ 18 ಲಕ್ಷ 41 ಸಾವಿರ ರೂ. ವಂಚಿಸಿದ್ದರು. ಇದರಿಂದ ಕಂಗಾಲಾದ ಮಹಿಳೆಯರು ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು.
ಚಾಲೆಂಜ್ ಆಗಿ ಸ್ವೀಕರಿಸದ ಸಿಎಎನ್ ಪೊಲೀಸ್ ನಿರೀಕ್ಷಕ ಗಡ್ಡೆಕರ ಆಂಡ್ ಟೀಮ್
 ಈ ಪ್ರಕರಣವನ್ನು ಚಾಲೆಂಜ್ ಆಗಿ ಸ್ವೀಕರಿಸದ ಸಿಎಎನ್ ಪೊಲೀಸ್ ನಿರೀಕ್ಷಕ ಗಡ್ಡೆಕರ ಆಂಡ್ ಟೀಮ್  ಫೀಲ್ಡಿಗಿಳಿದು ಆರಂಭಿಸಿ , ಮಹಿಳೆಯರು ಹಣ ಹಾಕಿದ್ದ ಟೆಲಿಗ್ರಾಂನಲ್ಲಿ ವಂಚಿಸುತ್ತಿದ್ದ ಸೈಬರ್ ಗ್ಯಾಂಗ್ ನ 21 ವಿವಿಧ ಬ್ಯಾಂಕ್ ಖಾತೆ ಪ್ರೀಜ್ ಮಾಡಿದ್ದಾರೆ.  ವಂಚಕರು ಉತ್ತರ ಭಾರತದವರೆಂದು ತಿಳಿದು ಬಂದಿದೆ.  ವಂಚಕರ ಬ್ಯಾಂಕ್ ಖಾತೆಯಲ್ಲಿದ್ದ 72 ಲಕ್ಷದ 50 ಸಾವಿರ ರೂಪಾಯಿ ಪ್ರೀಜ್ ಮಾಡಿದ್ದಾರೆ. ಬಳಿಕ ಪೊಲೀಸರು ಬೆಳಗಾವಿ 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹೋಗಿದ್ದು, ಸಂಬಂಧಿಸಿದವರ ಖಾತೆಗೆ ಹಣ ಮರು ಜಮಾ ಮಾಡುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿ ಆದೇಶ‌ ಹೊರಡಿಸಿದೆ. ಅದರಂತೆ ದೂರು ಕೊಟ್ಟಿದ್ದ ಇಬ್ಬರು ಮಹಿಳೆಯರಿಗೆ ಹಣ ಮರಳಿಸಿದ್ದಾರೆ.
 
ಇನ್ನು ಈ ಬಗ್ಗೆ ಬೆಳಗಾವಿ ಎಸ್‌ಪಿ ಡಾ. ಸಂಜೀವ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹೊರ ರಾಜ್ಯದಲ್ಲಿದ್ದುಕೊಂಡು ಸೈಬರ್ ಗ್ಯಾಂಗ್ ಕೆಲಸ ಮಾಡುತ್ತಿದೆ. 21 ಬ್ಯಾಂಕ್ ಖಾತೆಯ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಕಲಿ ಅಕೌಂಟ್ ಸೃಷ್ಟಿಸಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದು, ಖರ್ತನಾಕ್ ವಂಚಕರ ಗ್ಯಾಂಗ್ ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದರು. 
TV24 News Desk
the authorTV24 News Desk

Leave a Reply

error: Content is protected !!