Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಧಾರವಾಡ

ಪೊಲೀಸರ ಭರ್ಜರಿ ಬೇಟೆ ಅಫೀಮ್ ಸಹಿತ ವ್ಯಕ್ತಿ ಬಂಧನ 

ಹುಬ್ಬಳ್ಳಿ:  ರಾಜಸ್ತಾನ್ ದಿಂದ ಹುಬ್ಬಳ್ಳಿಗೆ ಅಫೀಮ್ ತಂದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಸಿಸಿಬಿ ಪೊಲೀಸರು ಬಂಧಿಸಿ, 3ಲಕ್ಷ ,ರೂಪಾಯಿ ಮೌಲ್ಯದ  253 ಗ್ರಾಂ ತೂಕದ ಅಫೀಮ್, ದ್ವಿಚಕ್ರ ವಾಹನ, ಮೊಬೈಲ್ ಹಾಗೂ 4,020/- ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪದ ನಿವಾಸಿ ಅರ್ಜುನರಾಮ ರತ್ನಾರಾಮ ಪಟೇಲ ವಯಾ 41 ವರ್ಷ ಬಂಧಿತ ಆರೋಪಿ. ಹುಬ್ಬಳ್ಳಿ ಘಂಟಿಕೇರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಸೆಟ್ಲಮೆಂಟ ರೋಡನಲ್ಲಿ ಇರುವ ವಸಂತ ಕೆಫೆಯ ಹತ್ತಿರ ಅಫೀಮ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಸಿಸಿಬಿ ವಿಭಾಗದ ಎಸಿಪಿ ನಾರಾಯಣ ವಿ. ಬರಮನಿ ಅವರ ಖಚಿತ ಮಾಹಿತಿ ಮೇರೆಗೆ ಪೋಲಿಸ್ ಇನ್ಸ್ಪೆಕ್ಟರ್ ಗೋಪಾಲ ರಾಠೋಡ ಮತ್ತು ಸಿಸಿಬಿ ಘಟಕದ ಮಾದಕ ದ್ರವ್ಯ ಅಪರಾಧಗಳ ವಿಭಾಗದ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾವಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ರಾಜಸ್ತಾನ್ ಮೂಲದ ಹುಕ್ಕುಂ ಸಿಂಗ್ ಅನ್ನೋ ವ್ಯಕ್ತಿಯಿಂದ ಅಫೀಮ್ ತೆಗೆದುಕೊಂಡು ಬಂದು ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ. ಹುಬ್ಬಳ್ಳಿ-ಧಾರವಾಡ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply

error: Content is protected !!