ಬೆಳಗಾವಿಬೆಳಗಾವಿ ನಗರ

ಹುಬ್ಬಳ್ಳಿಯಲ್ಲಿ ಕದ್ದ ಕಾರು ಬೆಳಗಾವಿಯಲ್ಲಿ ಪತ್ತೆ..!  

70 ರಿಂದ 80 ಲಕ್ಷ ದರೋಡೆ ಮಾಡಿ ಕಾರಿನೊಂದಿಗೆ ಪರಾರಿಯಾಗಿದ್ದ ಖದೀಮರು… 
ಬೆಳಗಾವಿ: ನಿನ್ನೆ ಗುರುವಾರ ಗೋಕುಲ್ ನಗರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮನೆಯಲ್ಲಿ ಬೆಳಿಗ್ಗೆ ಕಳ್ಳರು ಹಣ ಮತ್ತು ಚಿನ್ನಾಭರಣ 70 ರಿಂದ 80 ಲಕ್ಷ ದರೋಡೆ ಮಾಡಿ ಕಳ್ಳತನ ಮಾಡಿದ ಮನೆ ಅವರ ಕಾರಿನ ಜೊತೆ ಪರಾರಿಯಾಗಿದ್ದರು. ಆದರೆ ಗುರುವಾರ ಸಂಜೆ 8ರ ಸುಮಾರಿಗೆ ನಗರದ ಪೋರ್ಟ್ ರಸ್ತೆಯ ದೇಶಪಾಂಡೆ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಹುಂಡೈ ಕಾರು ಪತ್ತೆಯಾಗಿದೆ. ಕಾರು ಪತ್ತೆಯಾದ ಹಿನ್ನಲೆ ಹುಬ್ಬಳ್ಳಿಯ ಗೋಕುಲನಗರ ಪೊಲೀಸ್ ಠಾಣೆಯ ಸಿಬ್ಬಂದಿ ಬೆರಳಚ್ಚು ತಜ್ಞರು, ಇತರ ಪರಿಣಿತರು ತೀವ್ರ ತಪಾಸಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಳ್ಳರು ಹಣ ಮತ್ತು ಆಭರಣ ಲೂಟಿ ಮಾಡಿದ್ದಲ್ಲದೇ, ಆ ಮನೆಯವರ ಕಾರನ್ನೂ ಕೂಡಾ ಕದ್ದುಕೊಂಡು ಬಂದಿದ್ದು, ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುವಾಗ ಎಲ್ಲಾ ಚೆಕ್ ಪೋಸ್ಟ್ ಗಳಿಂದ ಹಾಗೂ ಸಿಸಿ ಕ್ಯಾಮರಾಗಳಿಂದ ಮಾಹಿತಿ ಪಡೆದ ಪೊಲೀಸರು, ಕೊನೆಗೆ ಬೆಳಗಾವಿಯಲ್ಲಿ ಕಳ್ಳರು ಕಳವು ಮಾಡಿದ ಕಾರನ್ನು ಪತ್ತೆಹಚ್ಚಿದ್ದಾರೆ..
ಕಳ್ಳರು ಕಾರನ್ನು ಇಲ್ಲಿ ನಿಲ್ಲಿಸಿ, ಹಣದೊಂದಿಗೆ ಪರಾರಿಯಾಗಿದ್ದು, ತನಿಖೆ ಮುಂದುವರೆಸುತ್ತಾ, ಕಳ್ಳರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಪೊಲೀಸ್ ಪಡೆ ನಿರತವಾಗಿದೆ. ಈ ಪ್ರಕರಣದ ತನಿಖೆಯಲ್ಲಿ ಹುಬ್ಬಳ್ಳಿ ಪೊಲೀಸರಿಗೆ ಬೆಳಗಾವಿಯ ಮಾರ್ಕೆಟ್ ಠಾಣೆಯ ಪೊಲೀಸರು ಕೂಡಾ ಸಹಕರಿಸಿ, ತನಿಖೆ ಮುಂದುವರೆಸಿದ್ದಾರೆ..
TV24 News Desk
the authorTV24 News Desk

Leave a Reply