

ಬೆಳಗಾವಿ:
ಕಬ್ಬಿಗೆ 6ಸಾವಿರ ದರ ನಿಗದಿಗೆ ಆಗ್ರಹಿಸಿ ಬೃಹತ್ ಹೋರಾಟವನ್ನು ಕೇಂದ್ರ ಸಕ್ಕರೆ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಮುಂದೆ ನಡೆಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು
ಬೆಳಗಾವಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸೆ.29ರಂದು ಪ್ರಹ್ಲಾದ್ ಜೋಶಿ ಮನೆ ಮುಂದೆ ಬೃಹತ್ ಪ್ರತಿಭಟನೆ ಮಾಡುತ್ತೇವೆ ಕಬ್ಬು ಬೆಳೆಗಾರರ ವಿವಿಧ ಹಕ್ಕೊತ್ತಾಯ ಈಡೇರಿಕೆಗೆ ಒತ್ತಾಯ ಮಾಡುತ್ತೆವೆ.ಕಬ್ಬು ಕಮೃಷಿಲಯಲ್ ಬೆಳೆಯಾಗಿದೆ.ವರ್ಷವಿಡೀ ರೈತರು ಕಬ್ಬು ಬೆಳೆಸಲು ಶ್ರಮ ಹಾಕುತ್ತಾರೆ ಹೀಗಾಗಿ 6ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು.
ಕಬ್ಬಿನಿಂದ ಉತ್ಪಾದನೆ ಆಗೋ ಎಥೆನಾಲ್ 100ರಷ್ಟು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು.ರಾಜ್ಯ ಸರ್ಕಾರ ಪ್ರತಿ ಟನಗೆ ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಬೇಕು
ಡಿಜಿಟಲ್ ತೂಕದ ವ್ಯವಸ್ಥೆ ಕಲ್ಪಿಸಲು 300ಕೋಟಿ ಹಣ ಮೀಸಲು ಇಡಬೇಕು.ಸಕ್ಕರೆ ಕನಿಷ್ಠ ಮಾರಾಟ ದರ( MSP) ಹೆಚ್ಚಿಸಲು ಹೋರಾಟ ಮಾಡಬೇಕು.ಇದಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು, ಆಡಳಿತ ಮಂಡಳಿಯವರು ನಮ್ಮ ಹೋರಾಟಕ್ಕೆ ಜತೆಗೆಯಾಗಬೇಕು.MSP ನೆಪವೊಡ್ಡಿ ದರ ಹೆಚ್ಚಳ ಮಾಡದಿದ್ದರೆ ಸುಮ್ಮನೆ ಕೂರೊದಿಲ್ಲ ಎಂದು ಚೂನಪ್ಪ ತಿಳಿಸಿದರು.









