ದೇಶ

ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು 350ಕ್ಕೂ ಹೆಚ್ಚು ಮಂದಿ ನೀರು ಪಾಲು

ಮೊರ್ಬಿ:ಗುಜರಾತಿನ  ಮೊರ್ಬಿ ಪಟ್ಟಣದಲ್ಲಿ ತೂಗು  ಸೇತುವೆ ಕುಸಿದು 350 ಕ್ಕೂ ಹೆಚ್ಚು ಜನರು ಹರಿಯುವ  ನದಿಗೆ ಬಿದ್ದಿರುವ  ಘಟನೆ ನಡೆದಿದೆ.ಅಕ್ಟೋಬರ್ 30 ರಂದು ಸಂಜೆ ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಕೇಬಲ್ ಸೇತುವೆ ಕುಸಿದು 350 ಕ್ಕೂ ಹೆಚ್ಚು ಜನರು ಹರಿಯುವ ಮಚ್ಚು ನದಿಯ ನಿರುಪಾಲಾಗಿದ್ದಾರೆ. ಮತ್ತು ಹಲವಾರು  ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳೀಯ ಆಡಳಿತದ ಪ್ರಕಾರ, ಸೇತುವೆಯ ಮೇಲೆ ಸಾವಿರಾರು ಜನರು ಇದ್ದರು.

ಸ್ಥಳದಲ್ಲಿ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಕ್ಟೋಬರ್ 26 ರಂದು ದುರಸ್ತಿ ಮತ್ತು ನವೀಕರಣದ ನಂತರ ಸೇತುವೆಯನ್ನು ಪುನಃ ತೆರೆಯಲಾಗಿತ್ತು.

TV24 News Desk
the authorTV24 News Desk

Leave a Reply