ದೇಶ

ನಮ್ಮ ದೇಶದ ರಾಷ್ಟ್ರಗೀತೆ ಬದಲು ನೇಪಾಳ ರಾಷ್ಟ್ರಗೀತೆ 

ಮುಂಬೈ : ರಾಹುಲ್‌ ಗಾಂಧಿ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಯುತ್ತಿದ್ದು, ಬುಧವಾರದ ಪಾದಯಾತ್ರೆ ಮುಕ್ತಾಯದ ವೇಳೆ ರಾಷ್ಟ್ರಗೀತೆ ಹಾಕುವ ವೇಳೆ ಈ ಘಟನೆ ನಡೆದಿದೆ. 
ದೇಶದ ರಾಷ್ಟ್ರಗೀತೆ ಹಾಕುವ ಬದಲು ನೇಪಾಳದ ರಾಷ್ಟ್ರಗೀತೆಯನ್ನು ಈ ವೇಳೆ ನುಡಿಸಲಾಗಿದೆ. ಇದರ ಕ್ಲಿಪ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಕ್ಲಿಪ್‌ನಲ್ಲಿ ರಾಹುಲ್‌ ಗಾಂಧಿ ಮಾತನಾಡುತ್ತಿದ್ದು, ತಮ್ಮ ಭಾಷಣದ ಕೊನೆಯಲ್ಲಿ ರಾಷ್ಟ್ರಗೀತೆ ನುಡಿಸುವಂತೆ ಹೇಳುತ್ತಾರೆ. ವೇದಿಕೆಯಲ್ಲಿದ್ದ ಪಕ್ಷದ ಎಲ್ಲಾ ನಾಯಕರು ಎದ್ದು ನಿಂತು ರಾಷ್ಟ್ರಗೀತೆಯನ್ನು ಹಾಡಲು ಪ್ರಾರಂಭ ಮಾಡುವ ವೇಳೆಯಲ್ಲಿಯೇ, ಭಾರತದ ಬದಲು ನೇಪಾಳದ ರಾಷ್ಟ್ರಗೀತೆ ಪ್ಲೇ ಆಗಿತ್ತು. ರಾಷ್ಟ್ರಗೀತೆಗಾಗಿ ಎದ್ದುನಿಂತ ಕಾಂಗ್ರೆಸ್‌ ನಾಯಕರಿಗೆ ಕೆಲ ಕ್ಷಣದ ಬಳಿಕ ಇದು ನಮ್ಮ ರಾಷ್ಟ್ರಗೀತೆಯಲ್ಲ ತಿಳಿದು ಬಂದ ತಿಳಿದು ಬಂದಿದೆ. 
ಇದರ  ಕ್ಲಿಪ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
TV24 News Desk
the authorTV24 News Desk

Leave a Reply