ಬೆಳಗಾವಿಬೆಳಗಾವಿ ನಗರ

ಅಂತರ್ ರಾಜ್ಯ ಕುಖ್ಯಾತ ಮನೆ ಕಳ್ಳರ ಬಂಧನ

ಬೆಳಗಾವಿ: ಬೆಳಗಾವಿ ನಗರದಲ್ಲಿ ಸೇರಿದಂತೆ ವಿವಿದೆಡೆ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಘಟಿಸುತ್ತಿದ್ದ ಹಗಲು ದರೋಡೆ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಹಿಡಿಯಲು ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿಸಿಪಿ ಶ್ರೀಮತಿ ಸ್ನೇಹಾ ಅವರ ನೇತೃತ್ವದಲ್ಲಿ ಮಾರ್ಕೆಟ್ ಎಸಿಪಿ ನಾರಾಯಣ ಬರಮಣಿ ಹಾಗು ಖಡೇಬಜಾರ ಎಸಿಪಿ ಚಂದ್ರಪ್ಪ ಎ ಅವರ ಮಾರ್ಗದರ್ಶನದಲ್ಲಿ ಪಿಐ ಗಳಾದ ನಿಂಗನಗೌಡ ಪಾಟೀಲ, ಪ್ರಭಾಕರ ಧರ್ಮಟ್ಟಿ ಅವರ ತಂಡ ಅಂತರ್ ರಾಜ್ಯ ಕುಖ್ಯಾತ ಮನೆ ಕಳ್ಳರನ್ನುಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ನಗರದ ಹಲವಾರು ಪೊಲೀಸ ಠಾಣೆಗಳಲ್ಲಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಇದರ ಜಾಡುಹಿಡಿದು
ವಿಶೇಷ ಅಪರಾಧ ಪತ್ತೆ ತಂಡ ನಿಖಿರವಾದ ಮಾಹಿತಿ ಕಲೆಹಾಕಿ ಕಳ್ಳತನ ಬಾಗಿಯಾದ ಪ್ರಕಾಶ ಪಾಟೀಲ ( ೩೭) ಸಾ.ವಡಗಾವಿ, ಮಹೇಶ ರಾಮಾ ಕಾಲೇಜಿನಕೊಪ್ಪ ಸಾ. ತಾಲ್ಲೂಕು ಖಾನಾಪುರ. ಎಂಬುವವರನ್ನು ಬಂಧಿಸಿದ್ದಾರೆ.
ಇವರನ್ನು ಗಣೇಶಪುರದ ಬಳಿ ವಶಕ್ಕೆ ಪಡೆದು ವಿಚಾರಿಸಿದಾಗ ಬೆಳಗಾವಿ ನಗರ, ಬೆಳಗಾವಿ ಜಿಲ್ಲೆ ಹಾಗು ಧಾರವಾಡ ಜಿಲ್ಲೆ ಹಲವಾರು ಕಡೆ ೨೨ ಮನೆಗಳಲ್ಲಿ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿರುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ . ಅಂತರ್ ರಾಜ್ಯ ಕುಖ್ಯಾತ ಮನೆ ಕಳ್ಳರನ್ನುಸೆರೆ ಹಿಡಿಯುವಲ್ಲಿ ಯಶಸ್ವಿಯಾದ ತಂಡದ ಕಾರ್ಯವನ್ನು ಶ್ಲಾಘಿಸಿರುವ ಪೊಲೀಸ ಆಯುಕ್ತರು ಬಹುಮಾನವನ್ನು ಘೋಷಿಸಿದ್ದಾರೆ.

TV24 News Desk
the authorTV24 News Desk

Leave a Reply