ವಿಜಯಪುರ

ಬಿಜೆಪಿ ತೆಕ್ಕೆಗೆ ವಿಜಯಪುರ ಮಹಾನಗರ ಪಾಲಿಕೆ 

ಬಿಜೆಪಿ ೧೭ ವಾರ್ಡುಗಳಲ್ಲಿ ಜಯ ಸಾಧಿಸಿದೆ
ವಿಜಯಪುರ :ಮಹಾನಗರ ಪಾಲಿಕೆಯ ಫಲಿತಾಂಶ ಹೊರಬಂದಿದ್ದು ೧೭ ವಾರ್ಡಗಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಸಾದಿಸಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆಯ ೩೫ ವಾರ್ಡುಗಳಿಗೆ  ನಡೆದ ಚುನಾವಣೆಯಲ್ಲಿ ಬಿಜೆಪಿ ೧೭, ಕಾಂಗ್ರೆಸ್ ೧೦, ಜೆಡಿಎಸ್ ೧ ,ಎಂಐಎಂ ೨ , ಪಕ್ಷೇತರ ೫, ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. 
 ವಿಜಯಪುರ ಮಹಾನಗರ ಪಾಲಿಕೆಯ ಅದಿಕಾರದ ಚುಕ್ಕಾಣಿ ಹಿಡಿಯಲು ಸಂಖ್ಯಾಬಲ ೧೮ ಬೇಕಾಗಿದ್ದು, ಬಿಜೆಪಿ ೧೭ ವಾರ್ಡುಗಳಲ್ಲಿ ಜಯ ಸಾಧಿಸಿದೆ. ಬಿಜೆಪಿಗೆ ೧ ಅಂಕೀಯ ಸಂಖ್ಯಾಬಲ ಬೇಕಾಗಿದೆ. 
ಕಳೆದ ಮೂರು  ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆ ಅಕ್ಟೊಬರ ೨೮ ರಂದು ನಡೆಸಲಾಗಿತ್ತು. 
ಹೆಚ್ಚಿನ ವಾರ್ಡಗಳಲ್ಲಿ ಗೆಲುವು ಸಾಧಿಸಿ ಬಹುಮತಕ್ಕೆ ಸಮೀಪವಿರುವ ಬಿಜೆಪಿ ಕಾರ್ಯಕ್ರತರ ಸಂಭ್ರಮ ಮುಗಿಲು ಮುಟ್ಟಿದೆ. ಗೆಲವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಬಣ್ಣ ಎರಚಿ ಮೆರವಣಿಗೆ ಮೂಲಕ ಸಂಭ್ರಮಿಸಿದ್ದಾರೆ.
TV24 News Desk
the authorTV24 News Desk

Leave a Reply