ದೇಶ

ಟ್ರಕ್ ಬೋಲೆರೋ ಡಿಕ್ಕಿ 7 ಮಂದಿ ದುರ್ಮರಣ 

ಭೋಪಾಲ:  ಅತಿ ವೇಗವಾಗಿ ಬಂದ ಟ್ರಕ್ಕೊಂದು ಬೊಲೆರೋ ಜೀಪಿಗೆ ಡಿಕ್ಕಿ ಹೊಡದೆ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಸಿದ್ಧಿ ನಗರದ ಬಳಿ ನಡೆದಿದೆ.
ಬೋಲೆರೋ ವಾಹನದಲ್ಲಿ ಚಾಲಕ ಸೇರಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಎಲ್ಲರೂ ಅಸುನೀಗಿದ್ದಾರೆ. ಅತಿವೇಗವಾಗಿ ಬಂದ ಟ್ರಕ್ ನೇರವಾಗಿ ಜೀಪಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿರುವ ಸಿಟಿ ಕೊತ್ವಾಲಿ ಠಾಣೆ ಪೊಲೀಸರು ಅಪಘಾತದಿಂದ ನಜ್ಜುಗುಜ್ಜಾಗಿದ್ದ ವಾಹನದಿಂದ ಸ್ಥಳೀಯರ ನೆರವಿನೊಂದಿಗೆ ಶವಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಟ್ರಕ್ ಚಾಲಕನ ಮೋಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.
TV24 News Desk
the authorTV24 News Desk

Leave a Reply