ಸವದತ್ತಿ: ಮತದಾನದ ವೇಳೆ ವೃದ್ದೆಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸವದತ್ತಿ ಮತ ಕ್ಷೇತ್ರದ ಯರಝರ್ವಿ ಗ್ರಾಮದಲ್ಲಿ ಈ ವಿದ್ರಾವಕ ಘಟನೆ ನಡೆದಿದೆ.
ಮದ್ಯಾಹ್ನ ಯರಝರ್ವಿಯ ಗ್ರಾಮದ ಬೂತ್ ಸಂಖ್ಯೆ 48 ರಲ್ಲಿ ಮತದಾನಕ್ಕೆ ಬಂದಿದ್ದ ಪಾರವ್ವ ಸಿದ್ನಾಳ (68) ವೃದ್ದೆ ರಕ್ತದ ಒತ್ತಡ ಕಡಿಮೆಯಾಗಿ ಪಾರವ್ವ ಸ್ಥಳದಲ್ಲಿ ಮೃತಪಟ್ಟ ದುರ್ದೈವಿ ಆಗಿದ್ದಾಳೆ
ಈ ಹಿನ್ನೆಲೆ ಕೆಲ ಕಾಲ ಮತದಾರರು ಭಯಭೀತರಾಗಿದ್ದರು. ತದ ನಂತರ ಪೋಲಿಸ್ ವೃದ್ದೆಯನ್ನು ಶವವನ್ನು ಮನೆಗೆ ಸ್ಥಳಾಂತರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.