ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಹಾಡುಹಗಲೇ ಪಂಚಾಯ್ತಿಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಹಂತಕರ ಬಂಧನ!

ಬೆಳಗಾವಿ:

ಗ್ರಾಮ ಪಂಚಾಯತಿಯಲ್ಲೇ ತಂದೆ ಮಗಳ ಹತ್ಯೆ ಮಾಡಿದ್ದ ಹಂತಕರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಹಾಡುಹಗಲೇ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ ಮಗಳ ಪ್ರಾಣವನ್ನು ಹಂತಕರು ತೆಗೆದಿದ್ದರು.ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಘಟನೆ ನಡೆದಿತ್ತು.
ಆಸ್ತಿ ವಿಚಾರಕ್ಕೆ ಅಣ್ತಮ್ಮಂದಿರ ನಡುವೆ ವಾಜ್ಯವಿತ್ತು ಅದೇ ಆಸ್ತಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಲು ಮತ್ತೊಬ್ಬ ಸಹೋದರ ಗ್ರಾಮ ಪಂಚಾಯ್ತಿಗೆ ಬಂದಿದ್ದಾಗ ಕೊಲೆ ನಡೆಸಲಾಗಿತ್ತು.ಮಾಜಿ ಯೋಧ ರುದ್ರಪ್ಪ ಕುಂದರಗಿ(67), ಪುತ್ರಿ ಶಶಿಕಲಾ ಕುಂದರಗಿ(26)ಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.ಘಟನೆಯಲ್ಲಿ ರುದ್ರಪ್ಪನ ಕಾರು ಚಾಲಕನಿಗೂ ಸಹ ಗಂಭೀರ ಗಾಯಗಳಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ರುದ್ರಪ್ಪ ಗ್ರಾಮ ಪಂಚಾಯತಿಗೆ ಬಂದ ವಿಚಾರ ತಿಳಿದ ಆತನ ಇಬ್ಬರು
ಸಹೋದರರು, ಓರ್ವ ಸಹೋದರನ ಪುತ್ರ ಈ ಹತ್ಯೆಯ ಸ್ಕೆಚ್ ಹಾಕಿದ್ದರು..
ಗ್ರಾಮ ಪಂಚಾಯತಿ ಒಳಗೆಡೆಯೇ ರುದ್ರಪ್ಪನ ಹತ್ಯೆ ಮಾಡುವ ಸಂದರ್ಭದಲ್ಲಿ
ಬಿಡಿಸಲು ಹೋದ ಮಗಳನ್ನು ಮನಬಂದಂತೆ ಕೊಚ್ಚಿ ಕೊಲೆ ಮಾಡಿಲಾಗಿತ್ತು.ಆಸ್ತಿ ಪಾಲಿಗೆ ಸಂಬಂಧಿಸಿದಂತೆ ರುದ್ರಪ್ಪ ಹಾಗೂ ಅಣ್ತಮ್ಮಂದಿರ ನಡುವೆ ಜಗಳ ಇತ್ತು ಎನ್ನಲಾಗಿದ್ದು 38 ಗುಂಟೆ ಆಸ್ತಿ ಪೈಕಿ ಮೂರು ಜನರಿಗೆ ಹಂಚಿಕೆ ಮಾಡಿ ಕೋರ್ಟ್ ಆದೇಶ ಮಾಡಿತ್ತು ಎನ್ನಲಾಗಿದೆ.ಆದರೆ ರುದ್ರಪ್ಪ ತನಗೆ ಬಂದಿದ್ದ ಜಮೀನನ್ನ ಮೊದಲೇ ಮಾರಿಕೊಂಡು
ಇನ್ನೂಳಿದ ಜಮೀನಿನಲ್ಲೂ ತನಗೆ ಪಾಲು ಬೇಕು ಎಂದು ಪಟ್ಟು ಹಿಡಿದಿದ್ದ ಎನ್ನಲಾಗಿದೆ.
ರುದ್ರಪ್ಪನ ಹೆಸರಿನಲ್ಲಿ ಆಸ್ತಿ ಇರುವ ಕಾರಣಕ್ಕೆ ಜಗಳ ಶುರುವಾಗಿದ್ದು ಇಬ್ಬರ ಆಸ್ತಿಯಲ್ಲೂ ಪಾಲು ಕೇಳಿದ್ದಕ್ಕೆ ಕುಪಿತಗೊಂಡಿದ್ದ ಇಬ್ಬರು ಸಹೋದರರು ಜಮೀನು ದಾಖಲು ಮಾಡಲು ಗ್ರಾಮ ಪಂಚಾಯತಿಗೆ ಬಂದಿದ್ದ ರುದ್ರಪ್ಪ ಹಾಗೂ ಆತನ ಮಗಳನ್ನು ಏಕಕಾಲಕ್ಕೆ ಕೊಲೆ ಮಾಡಿದ್ದಾರೆ.ಸದ್ಯ ರುದ್ರಪ್ಪ ಹಾಗೂ ಆತನ ಮಗಳ ಕೊಲೆ ಪ್ರಕರಣದಲ್ಲಿ ಆತನ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ‌ ಕುಂದರಗಿ ಮತ್ತು ಪುತ್ರ ಮಡಿವಾಳಪ್ಪ ಕುಂದರಗಿಯನ್ನು ಪೊಲೀಸರು ಬಂಧಿಸಿದ್ದು ಕೊಲೆಗೆ ಬಳಿಸಿದ ಆಯುಧಗಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸದ್ಯ ಅಟ್ಯಾಕ್
ಮಾಡಿ ಓಡಿ ಹೋಗಿದ್ದ ಮೂವರು ಆರೋಪಿಗಳನ್ನು ಕಿತ್ತೂರು ಪೊಲೀಸರು ಬಂಧಿಸಿದ್ದು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

TV24 News Desk
the authorTV24 News Desk

Leave a Reply

error: Content is protected !!