ಬೆಳಗಾವಿ:


ಚನ್ನಮ್ಮನ ಕಿತ್ತೂರು: ಇಲ್ಲಿಯ ದೇಮಟ್ಟಿ-ಮಲ್ಲಾಪುರ ಮಾರ್ಗದಲ್ಲಿ ಸೋಮವಾರ ರಾತ್ರಿ ಟಾಟಾ ಎಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ದೇಮಟ್ಟಿ ಗ್ರಾಮದ ಅಜಾದ್ ಇಸ್ಮಾಯಿಲ್ ಜಮಾದಾರ (45), ಪತ್ನಿ ಕೈರೂನ್ ಆಜಾದ್ ಜಮಾದಾರ (40) ಹಾಗೂ ಅಜಾದ್ ಅವರ ಅಳಿಯ ಬಾಬಾಜಾನ್ ನಿಸ್ಸಾರಅಹ್ಮದ್ ತಡಕೋಡ (16)ಮೃತರು. ದಂಪತಿಗಳು ಮೂಲತಃ ಧಾರವಾಡ ತಾಲ್ಲೂಕಿನ ಹೆಗ್ಗೇರಿ ಗ್ರಾಮದವರು. ಅಳಿಯ ದೇಮಟ್ಟಿ ಗ್ರಾಮದವ. ದಂಪತಿ ಅಂತ್ಯಕ್ರಿಯೆ ಹೆಗ್ಗೇರಿಯಲ್ಲಿ ನೆರವೇರಿತು. ಅಳಿಯನ ಅಂತ್ಯಕ್ರಿಯೆ ದೇಮಟ್ಟಿಯಲ್ಲಿ ಜರುಗಿತು ಎಂದು ಮೂಲಗಳು ತಿಳಿಸಿವೆ.
ದೇಮಟ್ಟಿಯಿಂದ ಚನ್ನಮ್ಮನ ಕಿತ್ತೂರಿಗೆ ಬೈಕ್ ಮೇಲೆ ಆಗಮಿಸುತ್ತಿದ್ದಾಗ ಟಾಟಾ ಎಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










