ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ನಕಲಿ ಔಷಧ ಜಾಲದ ವಿರುದ್ಧ ಕರವೇ ಕೊಡಿ ವಿವಾ ಫಾರ್ಮಾ ಮಾಲೀಕನ ಬಂಧನಕ್ಕೆ ಆಗ್ರಹ!

ಬೆಳಗಾವಿ:

ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಮಾಡುವ ಜಾಲ ಪತ್ತೆಯಾಗಿದ್ದು ಅದರಲ್ಲಿ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ವಿವಾ ಫಾರ್ಮ್ ಕೂಡ ನಕಲಿ ಔಷಧ ತಯಾರಿಸಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳು ಪತ್ತೆಯಾಗಿದೆ ಎಂದು ಕರವೇ ಕಾರ್ಯಕರ್ತರು ಹೇಳಿದರು. ರಾಜ್ಯದ ನಕಲಿ ಔಷಧ ತಯಾರಿಕಾ ಜಾಲದಲ್ಲಿ,ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ,ವಿವಾ ಫಾರ್ಮಾ ಎಂಬ ಸಂಸ್ಥೆಯೂ ಸೇರಿದ್ದು ಔಷಧಿ ಪ್ಯಾಕೇಟ್ ಗಳ ಮೇಲೆ ನಕಲಿ ಲೇಬಲ್ ಅಂಟಿಸಿ ನಕಲಿ ಔಷಧ ಮಾರಾಟ ಮಾಡುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಬೆಳಗಾವಿ ವಿವಾ ಫಾರ್ಮಾ ಮಾಲೀಕನನನ್ನು ಬಂಧಿಸಿ ಆತ ರಾಜ್ಯದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಸುತ್ತಿರುವ ಔಷಧಿ ವ್ಯಾಪಾರವನ್ನು ಬಂದ್ ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ನಡೆಸಿತು. ಅಲ್ಲದೇ ವಿವಾ ಫಾರ್ಮ್ ಮಾಲೀಕ ಹರ್ಷವರ್ಧನ್ ಅನೀಲಕುಮಾರ್ ಇಂಚಲ್ ನನ್ನು ಬಂಧಿಸುವಂತೆ ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಂಗಳವಾರ ಬೆಳಗ್ಗೆ ಬೆಳಗಾವಿಯ ಜ್ಯೋತಿ ಕಾಲೇಜು ಎದುರಿನಲ್ಲಿರುವ ವೀವಾ ಫಾರ್ಮ ಕಚೇರಿ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವಿವಾ ಫಾರ್ಮಾ ಪ್ರಕರಣವನ್ನು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ನಕಲಿ ಔಷಧಿಗಳನ್ನು ಹೊರರಾಜ್ಯದಿಂದ ತಂದು ಅದಕ್ಕೆ ವಿವಿಧ ಕಂಪನಿಗಳ ಲೇಬಲ್ ಅಂಟಿಸಿ, ಜನರ ಜೀವದ ಜೊತೆ ಚೆಲ್ಲಾಟವಾಡುವ ಜಾಲವನ್ನು ಸಂಪೂರ್ಣವಾಗಿ ಪತ್ತೆ ಮಾಡಲು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆಯೂ ಸಹ ಕರವೇ ಕಾರ್ಯಕರ್ತರು ಆಗ್ರಹಿಸಿದರು..

TV24 News Desk
the authorTV24 News Desk

Leave a Reply

error: Content is protected !!